ನಮ್ಮ
ಶಾಲೆಯಲ್ಲಿ ಅತ್ಯಾಧುನಿಕ
ತಂತ್ರಜ್ಞಾನದಿಂದ ಕೂಡಿದ ಇ ಕಲಿಕಾ ಕೇಂದ್ರವಿದ್ದು ಇತರೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ
ಇದರ ಪ್ರಯೋಜನವಾಗಲೆಂದು ಅವರುಗಳನ್ನು ನಮ್ಮ ಶಾಲೆಗೆ ಕರೆಸಿ ಅವರಿಗೂ ಕ್ಲಿಷ್ಟಕರ ವಿಷಯಕ್ಕೆ
ತಂತ್ರಜ್ಞಾನ ಆಧಾರಿತ ಬೋಧನೆಯನ್ನು ಮಾಡಲಾಗುವುದು.
ನಮ್ಮಶಾಲೆಯ ಇ ಕಲಿಕಾ ಕೇಂದ್ರಕ್ಕೆ ಮೂರು ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರೌಢಶಾಲೆ ಕೆ.ಜಿ ದೊಡ್ಡಿಯಿಂದ ಹತ್ತನೇ ತರಗತಿಯ 29 ವಿದ್ಯಾರ್ಥಿಗಳು ಮತ್ತು ವಿಜ್ಞಾನ ಶಿಕ್ಷಕರಾದ ಶ್ರೀಯುತ ಬಸವರಾಜು ಸರ್ ರವರು ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಯುತ ಕೃಷ್ಣಕುಮಾರ್ ಸರ್ ರವರು ಭೇಟಿ ನೀಡಿದರು. ಸುಮಾರು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1:00 ಘಂಟೆಯವರೆಗೆ ಇದ್ದು 3ಡಿ ವರ್ಚ್ಯೂಲ್ ಎಕ್ಸ್ ಪೆರಿಮೆಂಟ್ ಗಳನ್ನು ಮತ್ತು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಮಲ್ಟಿಮೀಡಿಯಾ ಇ-ಕಂಟೆಂಟ್ ಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳಂತೂ ಲ್ಯಾಪ್ ಟ್ಯಾಪ್ ಗಳನ್ನು ತಾವೇ ಸ್ವತಃ ಬಳಸಿ ಖುಷಿಪಟ್ಟರು.




ಖುಷಿ ಆಯ್ತು ಸರ್. Good work
ReplyDelete