K.P Mahadeva prasad
ICT integration in Teaching and Learning of Science
Friday, June 24, 2022
Wednesday, May 26, 2021
Tuesday, February 11, 2020
Saturday, August 3, 2019
Tuesday, July 30, 2019
Wednesday, July 24, 2019
Monday, July 22, 2019
ಚಂದ್ರಯಾನ-2 ಮಿಷನ್ ನ ಉಡಾವಣೆಯ ನೇರ ಪ್ರಸಾರ
ಇಂದು ನಮ್ಮ ಶಾಲೆಯ ಸರ್
ಸಿ.ವಿ ರಾಮನ್ ಇ ಕಲಿಕಾ ಕೇಂದ್ರದಲ್ಲಿ ಚಂದ್ರಯಾನ-2 ಮಿಷನ್ ನ ಉಡಾವಣೆಯ ನೇರ ಪ್ರಸಾರವನ್ನು
ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ವೀಕ್ಷಿಸಿದರು. ಉಡಾವಣೆಯು ಯಶಸ್ವಿಯಾಗುತ್ತಿದ್ದಂತೆ ನಮ್ಮ ಶಾಲೆಯ
ಎಲ್ಲಾ ವಿದ್ಯಾರ್ಥಿಗಳು ಚಪ್ಪಾಳೆಯ ಮೂಲಕ ಹರ್ಷೋಧ್ಘಾರ ವ್ಯಕ್ತಪಡಿಸಿದರು. ಈ ಮೂಲಕ ನಮ್ಮ ದೇಶವೇ ಹೆಮ್ಮೆ ಪಡುವಂತಹ ವಿಜ್ಞಾನ ಲೋಕದಲ್ಲೇ
ಯಾರೂ ಸಾಧಿಸದ ಚಂದ್ರನ ದಕ್ಷಿಣ ದೃವಕ್ಕೆ ರೋಬೋವನ್ನು ಕಳುಹಿಸುವ ಈ ಯಶಸ್ವಿ ಉಡ್ಡಯನದ ಸಾಧನೆಗೈದ
ಇಸ್ರೋ ತಂಡದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂಧನೆಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕರು, ವಿಜ್ಞಾನ
ವಿಷಯ ಶಿಕ್ಷಕರು, ಹಿಂದಿ ಭಾಷಾ ಶಿಕ್ಷಕರು ಹಾಗೂ ಗೌತಮ ಬುದ್ಧ ಬಿಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು
ಉಪಸ್ಥಿತರಿದ್ದರು. ಈ ಸಾಧನೆಗೈದ ಇಸ್ರೋ ತಂಡದ ಎಲ್ಲಾ ವಿಜ್ಞಾನಿಗಳಿಗೆ ನಮ್ಮ ಶಾಲೆಯ ಪರವಾಗಿ ಕೋಟಿ
ಕೋಟಿ ನಮನಗಳನ್ನು ಅರ್ಪಿಸಲಾಯಿತು.
Thursday, July 18, 2019
Wednesday, July 17, 2019
ಒಂದು ದಿನದ ವಿಜ್ಞಾನ ಕಾರ್ಯಗಾರ
ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ಜಿಲ್ಲೆಯಾದ್ಯಂತ ವಿಷಯವಾರು ಒಂದು ದಿನದ ಕಾರ್ಯಗಾರವನ್ನು ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳುತ್ತಿದೆ. ಇದರ ಅಂಗವಾಗಿ ದಿನಾಂಕ: 17-07-2019 ಬುಧವಾರದಂದು ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಮಳವಳ್ಳಿ ಟೌನ್ ನಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಒಂದು ದಿನದ ಕಾರ್ಯಗಾರವನ್ನುಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಯುತ ಕಾಳರಾಜೇಗೌಡ ರವರು ವಹಿಸಿದ್ದರು. ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಎ.ಟಿ ಶಿವಲಿಂಗಯ್ಯ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಯುತ ಸಿ.ಎಲ್ ನಂಜರಾಜು ರವರು ವಿಜ್ಞಾನ ವಿಷಯ ಪರಿವೀಕ್ಷಕರು ಹಾಗೂ ಶ್ರೀಯುತ ಎನ್.ಎನ್ ಯೋಗೇಶ್ ರವರು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಮತ್ತು ಶ್ರೀಯುತ ಎ.ಸಿ ಜಯಪ್ರಕಾಶ್ ರವರು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಇವರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇ.ಸಿ.ಒ ಆದ ಶ್ರೀಯುತ ಸಿದ್ದರಾಜು ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಸಿ.ಎಲ್ ನಂಜರಾಜು ರವರು ವಿಜ್ಞಾನ ವಿಷಯ ಪರಿವೀಕ್ಷಕರು, ಶ್ರೀಯುತ ನಾಗರಾಜು ರವರು ಪ್ರಾಂಶುಪಾಲರು ಜಿ.ಜೆ.ಸಿ ಕಿರಗಾವಲು, ಶ್ರೀಯುತ ಮಹದೇವ ಪ್ರಸಾದ್ ರವರು ಸಹ ಶಿಕ್ಷಕರು ಜಿ.ಜೆ.ಸಿ ಮಳವಳ್ಳಿ ಟೌನ್ ಮತ್ತು ಶ್ರೀಯುತ ಜಿ.ಸಿ ಸಿದ್ದರಾಜು ರವರು ಚಿತ್ರಕಲಾ ಶಿಕ್ಷಕರು ಜಿ.ಹೆಚ್.ಎಸ್ ಕೊಕ್ಕರೆ ಬೆಳ್ಳೂರು ಇವರುಗಳು ಕಾರ್ಯನಿರ್ವಹಿಸಿದರು. ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರುಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದರು.

Tuesday, July 9, 2019
ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ-2019
ಇಂದು ದಿನಾಂಕ:09-07-2019 ಮಂಗಳವಾರದಂದು ನಮ್ಮ
ಶಾಲೆಯಲ್ಲಿ ಹಲಗೂರು ಹೋಬಳಿ ನಾಗರೀಕ ಹಿತರಕ್ಷಣಾ ಟ್ರಸ್ಟ್(ರಿ) ವತಿಯಿಂದ ನಮ್ಮ ಶಾಲೆಯ ವಿದ್ಯರ್ಥಿಗಳಿಗೆ
ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 25ರಿಂದ
30 ಸಾವಿರ ರೂಗಳ ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ
ಮುಖ್ಯ ಅಥಿತಿಯಾಗಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದಂತ ಶ್ರೀಯುತ ಎನ್.ಎನ್ ಯೋಗೇಶ್
ರವರು ಭಾಗವಹಿಸಿದ್ದರು. ನಮ್ಮಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಚಂದ್ರಮ್ಮನವರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕರಾದ ಶ್ರೀಯುತ
ಕಾಳರಾಜೇಗೌಡ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು , ಸಿಬ್ಬಂದಿ ವರ್ಗದವರು,
ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
Subscribe to:
Comments (Atom)


















